ಮೊದಲ ವರ್ಷ :
ನಾಟಿ ಕ್ರಮ : |
ಮೇ ತಿಂಗಳಲ್ಲಿ, ಅಡಿಕೆ ಮರದಿಂದ 30 ಸೆಂ. ಮೀ. ದೂರದಲ್ಲಿ 45 ಸೆಂ.ಮೀ. ಘನಾಕಾರದ ಗುಂಡಿ ತೆಗೆದು ಮೇಲ್ಮಣ್ಣು, 5 ಕೆ.ಜಿ. ಕೊಟ್ಟಿಗೆ ಗೊಬ್ಬರ 150 ಗ್ರಾಂ ರಾಕ್ ಫಾಸ್ಪೇಟ್, 500 ಗ್ರಾಂ ಬೇವಿನ ಹಿಂಡಿ ಮತ್ತು 50 ಗ್ರಾಂ ಟ್ರೈಕೋ ಡರ್ಮ್‌ವನ್ನು ಹಾಕಿ ಮುಚ್ಚಬೇಕು. ಮಳೆ ಗಾಲ ಪ್ರಾರಂಭವಾದೊಡನೆ (ಜೂನ್ ಮೊದಲನೇ ವಾರ) ಬೇರು ಕೊಟ್ಟಿರುವ ಕುಡಿಯನ್ನು ನಾಟಿ ಮಾಡಬೇಕು. ಸಸಿ ಕುಣಿಯಲ್ಲಿ ನೀರು ನಿಲ್ಲದ ರೀತಿಯಲ್ಲಿ ನಾಟಿ ಮಾಡಿ ಮುಚ್ಚಿಗೆ ಮಾಡಬೇಕು. |
ಕುಡಿಗಳ ಫೋಷಣೆ : |
ಆಗಸ್ಟ್ ತಿಂಗಳಲ್ಲಿ ಆಧಾರ ಮರಕ್ಕೆ ಕುಡಿ ಹಬ್ಬಿಸಿ ಕಟ್ಟುವುದು ಹಾಗೂ ಕುಡಿ ತಿದ್ದುವುದು. ಒಂದು ಮೀಟರ್ ಎತ್ತರ ಬಂದಾಗ ಎಳೆಕುಡಿಯನ್ನು ಚಿವುಟುವುದು. ಬಳ್ಳಿಯ ಸುತ್ತಲೂ ಕಳೆ ತೆಗೆಯೆವುದು ಬಳ್ಳಿ ಮೇಲೆ ಬೆಳೆದಂತೆ ಆಧಾರ ಮರಕ್ಕೆ ಕಟ್ಟುವುದು. ಬಳ್ಳಿ 5 ಅಡಿ ಬೆಳೆದಾಗ ಮತ್ತೆ ಕುಡಿ ಚಿವುಟಿ ತೆಗೆಯುವುದು. ನೀರಾವರಿ ವ್ಯವಸ್ಥೆ ಕಲ್ಪಿಸುವುದು. |
-: ಗಮನಿಸಿ :-
ತೋಟದಲ್ಲಿ ಅಂತರ್ಗತ ಬಸಿಗಾಲುವೆ (ಡೈನೇಜ್) ವ್ಯವಸ್ಥೆ ಇದ್ದಲ್ಲಿ ಕನಿಷ್ಠ ಒಂದು ಅಡಿಯ ತೆರೆದ ಬಸಿಗಾಲುವೆ ಅವಶ್ಯ.
2ನೇ ವರ್ಷದಿಂದ ಪ್ರತಿ ವರ್ಷ
ಜೂನ್ | ಜೂನ್ ಕೊನೆಯ ವಾರದಲ್ಲಿ ಮೊದಲ ಬೊರ್ಡೋ ಸಿಂಪರಣೆ. ಬಸಿಗಾಲುವೆ ಸರಿಯಾಗಿಡುವುದು. ಬಳ್ಳಿ ಮೇಲೆ ಬೆಳೆದಂತೆ ಆಧಾರ ಮರಕ್ಕೆ ಕಟ್ಟುವುದು. |
ಅಗಸ್ಟ | ಎರಡನೇ ಬಾರಿ ಬೊರ್ಡೋ ಸಿಂಪರಣೆ. |
ಸಪ್ಟೆಂಬರ-ಅಕ್ಟೋಬರ | ಬಳ್ಳಿ ಮೇಲೆ ಬೆಳೆದಂತೆ ಆಧಾರ ಮರಕ್ಕೆ ಕಟ್ಟುವುದು. ಬುಡಕ್ಕೆ ಮಣ್ಣೇರಿಸುವುದು. ಮುಚ್ಚಿಗೆ ಮಾಡುವುದು. ನೀರಾವರಿ ವ್ಯವಸ್ಥೆ ಕಲ್ಪಿಸುವುದು. |
ಜನವರಿ | ಕೊಯ್ಲು ಮಾಡುವುದು ಮತ್ತು ಸಂಸ್ಕರಣೆ : 10-15% ಹಣ್ಣಾದಾಗ 2-3 ಹಂತದಲ್ಲಿ ಕೊಯ್ಲು ಮಾಡುವುದು. (ನೋಡಿ : ಕೊಯ್ಲೊತ್ತರ ಸಂಸ್ಕರಣೆ) |
ಮೇ | ಹಬ್ಬು ಕುಡಿ ತೆಗೆಯುವುದು/ ಮೇಲೆತ್ತಿ ಕಟ್ಟುವುದು (ಕುಡಿ ತಿದ್ದುವುದು) |
ಮಾಹಿತಿಯ ಮೂಲ : TMS Pepper Handbook
ಮುಖಪುಟ .... ಹಿಂದೆ ಹೋಗಿ