ಕಪ್ಪು ಕಾಳು ಮಾಡುವ ಸುಧಾರಿತ ತಂತ್ರಜ್ಞಾನ
ಬಿಡಿಸಿದ ಕಾಳುಗಳನ್ನು ಚೆನ್ನಾಗಿ ಬಿಸಿಲು ಬರುವ ಜಾಗದಲ್ಲಿ ನೆರಳು ಪರದೆಯ ಮೇಲೆ 2.0-2.5 ಸೆಂ.ಮೀ. ದಪ್ಪ ಹರಡಿ ಪಾರದರ್ಶಕ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು. (ಮೆಣಸಿನ ಕಾಳನ್ನು ಕರೆಯಿಂದ ಬೇರ್ಪಡಿಸುವ ಯಂತ್ರ)
ಸಂಜೆ 4-5 ಗಂಟೆಗೆ ಕಾಳುಗಳನ್ನು ಒಟ್ಟು ಮಾಡಿ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚುವುದು.
ನಂತರದ 3-4 ದಿನ ಕಾಳುಗಳನ್ನು ತೆರೆದ ಬಿಸಿಲಿಗೆ ಒಣಗಿಸುವುದು. ಹೀಗೆ ಮಾಡಿದಲ್ಲಿ ಕಾಳು ಕಡು ಕಪ್ಪು ಬಣ್ಣ ಪಡೆದುಕೊಳ್ಳುತ್ತದೆ.
ಪ್ರಾತ್ಯಕ್ಷಿಕೆಗಾಗಿ ನೋಡಿ : TMS Video
ಅಥವಾ
ಬಿಸಿ ನೀರಿನಲ್ಲಿ ಅದ್ದಿ ತೆಗೆಯುವುದು (Blanching): ಕಾಳುಗಳನ್ನು ಬಿಸಿ ನೀರಿನಲ್ಲಿ ಒಂದು ನಿಮಿಷ ಅದ್ದಿ ತೆಗೆದು ಒಣಗಿಸುವುದು.
ಬೋಳಕಾಳು ಮಾಡುವ ವಿಧಾನ
ಬೋಳಕಾಳು ಮೆಣಸು ಮಾಡಲು ಹಣ್ಣಾದ ಕಾಳುಗಳನ್ನು ಪ್ರತ್ಯೇಕಿಸಿ ನೀರಿನಲ್ಲಿ 10-12 ದಿನ ಕೊಳೆಸಬೇಕು.
ಹೀಗೆ ಮಾಡುವಾಗ ನೀರನ್ನು ಪ್ರತಿ ದಿನ ಬದಲಾಯಿಸಬೇಕು.
ನಂತರ ಸಿಪ್ಪೆಯನ್ನು ಬೇರ್ಪಡಿಸಿ 2-3 ದಿನ ಬಿಸಿಲಲ್ಲಿ ಒಣಗಿಸಬೇಕು.
ಮುಖಪುಟ .... ಹಿಂದೆ ಹೋಗಿ