ಪೋಷಕಾಂಶಗಳ ಪ್ರಮಾಣ ಮತ್ತು ಅನ್ವಯಿಸುವ ವಿಧಾನಗಳು

ಅಡಿಕೆ ತೋಟದಲ್ಲಿ ಪೋಷಕಾಂಶ ನಿರ್ವಹಣೆಯನ್ನು ತೋಟದಲ್ಲಿರುವ ಎಲ್ಲಾ ಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಇದು ಕೂಲಿ ಕೆಲಸದ ಖರ್ಚನ್ನು ಕಡಿಮೆ ಮಾಡಲು ಕೂಡ ಸಹಕಾರಿ. ಕೆಳಗಿನ ಕೋಷ್ಟಕವನ್ನು ಅಡಿಕೆ ಮತ್ತು ಮೆಣಸನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ.

ಯೂರಿಯ ಹಾಗೂ ಎಂ ಓ ಪಿ ಗೊಬ್ಬರಗಳನ್ನು ಹೆಚ್ಚೆಚ್ಚು ಕಂತು ಮಾಡಿ ಕೊಟ್ಟಷ್ಟೂ ಒಳ್ಳೆಯದು. ಮಳೆಗಾಲದ ನಂತರ ಡ್ರಿಪ್ ಮೂಲಕ ೧೫ ಕಂತು ಮಾಡಿ ಕೊಟ್ಟುಉತ್ತಮ ಬೆಳೆ ತೆಗೆದುಕೊಂಡ ಉದಾಹರಣೆಗಳಿವೆ.

ಪೋಷಕಾಂಶ ಅನ್ವಯಿಸುವ ವಿಧಾನ
ಯೂರಿಯ (Urea)
(N - ನೈಟ್ರೋಜನ್)
ತಿಂಗಳು ಅಡಿಕೆ ಮೆಣಸು
ಮೇ - ಜೂನ್ 80 ಗ್ರಾಮ್ 80 ಗ್ರಾಮ್
ಜೂಲೈ - ಸೆಪ್ಟೆಂಬರ್
ಮಧ್ಯ ಮಳೆ ಕಡಿಮೆ ಇದ್ದಾಗ
60 ಗ್ರಾಮ್ 60 ಗ್ರಾಮ್
ಅಕ್ಟೊಬರ್ 80 ಗ್ರಾಮ್ 80 ಗ್ರಾಮ್
ಮರ ಹಾಗೂ ಬಳ್ಳಿಯ ಬುಡದಿಂದ ಕನಿಷ್ಠಪಕ್ಷ 45 ಸೆಂ. ಮೀ ದೂರದಲ್ಲಿ ಹಾಕಬೇಕು.

ಒಂದೇ ಬಾರಿಗೆ ಹೆಚ್ಚು ಯೂರಿಯ ಹಾಕುವದರಿಂದ ಮರ / ಬಳ್ಳಿಗೆ ಹಾನಿ ಆಗುವ ಸಂಭವ ತಪ್ಪಿಸಲು 3 ಕಂತು ಮಾಡಿದೆ.

ಎಂ. ಓ. ಪಿ. (Muriate of Potassium)
(K - ಪೊಟಾಷ್ ಅಥವಾ ಪೊಟ್ಯಾಸಿಯಂ)
(ಯೂರಿಯ ಜೊತೆ ಸೇರಿಸಿ ಕೊಡಬಹುದು)
ತಿಂಗಳು ಅಡಿಕೆ ಮೆಣಸು
ಮೇ - ಜೂನ್ 80 ಗ್ರಾಮ್ 80 ಗ್ರಾಮ್
ಜೂಲೈ - ಸೆಪ್ಟೆಂಬರ್
ಮಧ್ಯ ಮಳೆ ಕಡಿಮೆ ಇದ್ದಾಗ
75 ಗ್ರಾಮ್ 75 ಗ್ರಾಮ್
ಅಕ್ಟೊಬರ್ 80 ಗ್ರಾಮ್ 80 ಗ್ರಾಮ್
ಮರ ಹಾಗೂ ಬಳ್ಳಿಯ ಬುಡದಿಂದ ಕನಿಷ್ಠಪಕ್ಷ 45 ಸೆಂ. ಮೀ ದೂರದಲ್ಲಿ ಹಾಕಬೇಕು.
ರಾಕ್ ಫೋಸ್ಪೇಟ್ (Rock Phosphate)
(P - ಫಾಸ್ಫೇಟ್)

ಸೆಪ್ಟೆಂಬರ್ ತಿಂಗಳಲ್ಲಿ 1 ಬಾರಿ

ಅಡಿಕೆ ಮರ ಮಾತ್ರ ಇದ್ದಲ್ಲಿ : 200ಗ್ರಾಮ್
ಅಡಿಕೆ + ಮೆಣಸು : 400ಗ್ರಾಮ್

(ಕಾಂಪೋಸ್ಟ್ ಜೊತೆಯಲ್ಲಿ ಕೊಡುವದು ಉತ್ತಮ)

(ಸುಣ್ಣದ ಜೊತೆ ಸೇರಿಸಬಾರದು)

ಸಾವಯವ ಗೊಬ್ಬರ (ಕಾಂಪೋಸ್ಟ್) ಸೆಪ್ಟೆಂಬರ್ ತಿಂಗಳಲ್ಲಿ 1 ಬಾರಿ
5 ಕೆಜಿ ಪ್ರತೀ ಅಡಿಕೆ ಮರ + ಬಳ್ಳಿಗೆ
ಟ್ರೈಕೋಡರ್ಮಾ ಮತ್ತು ಸ್ಯೂಡೋಮೊನಾಸ್ ಬೆರೆಸಿದ ಬೇವಿನ ಹಿಂಡಿ ಜೂನ್ ತಿಂಗಳಲ್ಲಿ 1 ಬಾರಿ
೧ ಕೆಜಿ ಪ್ರತೀ ಅಡಿಕೆ ಮರ + ಬಳ್ಳಿಗೆ
ಸುಣ್ಣ (ಡೋಲೋಮೈಟ್) ನವೆಂಬರ್ ತಿಂಗಳಿನಲ್ಲಿ ಮರ ಒಂದಕ್ಕೆ 500 ಗ್ರಾಂ
ಇಡೀ ಬಣ್ಣದಲ್ಲಿ ಹರಡಿ ಮಣ್ಣಿನ ಜೊತೆ ನೇರ ಸಂಪರ್ಕಕ್ಕೆ ಬರುವಂತೆ ಮಾಡುವದು.
ಉಳಿದ ಗೊಬ್ಬರಗಳ ಜೊತೆ ಸೇರಿಸಬಾರದು. ಕಡಿಮೆ ಅಂದರೂ 15 ದಿನಗಳ ಅಂತರ ಇದ್ದಲ್ಲಿ ಒಳ್ಳೆಯದು.
ಫೋಲಿಯಾರ್ ಸ್ಪ್ರೇ ಗೊಬ್ಬರ (foliar spray)

ಮಳೆಗಾಲದ ಆರಂಬದಲ್ಲಿ 1 ಬಾರಿ
ಅಕ್ಟೋಬರ್ / ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ 2 ಬಾರಿ (ಮಳೆ ನಿಂತ ನಂತರ)

1 ಲೀಟರ್ ನೀರಿನಲ್ಲಿ ಈ ಕೆಳಗಿನ ರಸಗೊಬ್ಬರಗಳನ್ನು ಕರಿಗಿಸಿ
1) 13:0:45 - 5 ಗ್ರಾಂ
2) 19:19:19 - 5 ಗ್ರಾಂ
3) ಪೆಪ್ಪರ್ ಸ್ಪೆಷಲ್ - 5 ಗ್ರಾಂ
4) ಅಂಟಿನ ದ್ರಾವಣ - 1 ಮೀ ಲೀ

ಬಳ್ಳಿಯ ಎಲ್ಲಾ ಎಲೆಗಳು ತೋಯುವ ಹಾಗೆ ಸಿಂಪಡಿಸಬೇಕು



ಮುಖಪುಟ .... ಹಿಂದೆ ಹೋಗಿ